ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಾಲಿವುಡ್ ನಟಿ ಕಂಗನಾ ಕಿಡಿ

ಬಾಂದ್ರಾದಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಕನಸಿನ ಬಂಗಲೆಯನ್ನು ಮುಂಬೈ ಪಾಲಿಕೆ ಅಧಿಕಾರಿಗಳು ಧ್ವಂಸಗೊಳಿಸಿದ ಹಿನ್ನಲೆಯಲ್ಲಿ, ಶಿವಸೇನೆ ಹಾಗೂ ಕಂಗನಾ ರಣವಾತ್ ನಡುವಿನ ಮಾತಿನ ಚಕಮಕಿ ತೀವ್ರವಾಗಿದ್ದಲ್ಲದೆ, ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಕಂಗನಾ ಕಿಡಿಕಾರುತ್ತಿದ್ದಾರೆ. 

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ ಫೇಸ್ಬುಕ್ ಪೇಜ್ ಲೈಕ್ ಮಾಡಿ -->>

ಮುಂಬೈ ಏರ್ಪೋರ್ಟ್ಗೆ ಮನಾಲಿಯಿಂದ ಆಗಮಿಸಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ನೇರವಾಗಿ ತಮ್ಮ ನಿವಾಸಕ್ಕೆ ತೆರಳುತ್ತಿದ್ದಂತೆ, ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ನಟಿ ಕಂಗನಾ ವಾಗ್ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೇ ನಟಿ ಕಂಗನಾ ಏಕವಚನದಲ್ಲೇ ಮಹಾರಾಷ್ಟ್ರ ಸಿಎಂ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬಾಲಿವುಡ್ ನಟಿ ಕಂಗನಾ ರಣಾವತ್ ಅವರು “ಉದ್ಧವ್ ಠಾಕ್ರೆ, ನೀನು ಏನ ಅನ್ಕೊಂಡಿದ್ದಿಯಾ, ನೀನು ಫಿಲ್ಮ್ ಮಾಫಿಯಾದೊಂದಿಗೆ ಕೈಜೋಡಿಸಿ, ಅವರ ಜೊತೆ ಸೇರಿ ನನ್ನ ಮನೆಯನ್ನ ಒಡೆಸುವುದರ ಮೂಲಕ ಸೇಡು ತೀರಿಸಿಕೊಂಡಿದ್ದಿಯಾ ಅಂತ ಅನ್ಕೊಂಡಿದ್ದಿಯಾ? ಇವತ್ತು ನನ್ನ ಒಡೆದಿದೆ, ನಾಳೆ ನಿನ್ನ ಅಹಂಕಾರ ಮುರಿಯತ್ತೆ. ಇದೆಲ್ಲ ಕಾಲಚಕ್ರ ಅಷ್ಟೇ. ನೆನಪಿಟ್ಟಕೋ, ಯಾವಾಗಲೂ ಸಮಯ ಒಂದೇ ತರಹ ಇರುವುದಿಲ್ಲ. ಮತ್ತು, ನೀನು ಈ ತರಹ ಮಾಡಿ, ನನ್ನ ಮೇಲೆ ದೊಡ್ಡ ಹೊರೆ ಹೊರಿಸಿದ್ದಿಯಾ. ಯಾಕೆಂದರೆ, ಕಶ್ಮೀರ ಪಂಡಿತರ ಮೇಲೆ ಯಾವ ತರಹ ಪ್ರಭಾವ ಬೀರಿದೆ ಎಂದು ನನಗೆ ಇವತ್ತು ಅರ್ಥವಾಯಿತು, ಹಾಗೂ ಅದು ನನಗೆ ಇವತ್ತು ಆ ಅನುಭವ ಕೂಡಾ ಆಯಿತು. 

ಇವತ್ತು ನಾನು ನಮ್ಮ ಈಡೀ ದೇಶಕ್ಕೆ ಒಂದು ಪ್ರಮಾಣ ಮಾಡುತ್ತೆನೆ, ಅದೇನೆಂದರೆ, ನಾನು ಕೇವಲ ಅಯೋಧ್ಯದ ಮೇಲೆ ಅಷ್ಟೇ ಅಲ್ಲ ಕಶ್ಮೀರದ ಮೇಲೂ ಒಂದು ಸಿನಿಮಾ ಮಾಡಿತ್ತೇನೆ. ಮತ್ತು ನಾನು ನಮ್ಮ ದೇಶದ ಜನತೆಗೆ ಇದರ ಬಗ್ಗೆ ಜಾಗೃತೆ ಕೂಡಾ ಮೂಡಿಸುತ್ತೆನೆ. ಉದ್ಧವ್ ಠಾಕ್ರೆ, ನನ್ನ ಮೇಲೆ ನೀನು ತೊರಿಸಿರುವ ಈ ಕ್ರೂರತೆ, ಒಂದು ತರಹ ಒಳ್ಳೆಯದ್ದಾಗಿದೆ. ಏಕೆಂದರೆ ಅದು ಅರ್ಥಪೂರ್ಣವಾಗಿದೆ.” ಎಂದು ಟ್ವೀಟ್ ಮಾಡುವುದರ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.

ಇಂದು ಬೆಳಗ್ಗೆ ಮುಂಬೈನ ಪಾಲಿ ಹಿಲ್ಸ್ ನಲ್ಲಿರುವ ಕಂಗನಾ ರಣಾವತ್ ಕಚೇರಿ ಕಟ್ಟಡವನ್ನ ಬಿಎಂಸಿ ನೆಲಸಮ ಮಾಡಲು ಮುಂದಾಗಿತ್ತು ಆದರೆ ಹೈಕೋರ್ಟ್ ನೆಲಸಮ ಕಾರ್ಯಕ್ಕೆ ಮಧ್ಯಾಹ್ನ ತಡೆ ನೀಡಿದ ಕಾರಣ ಬಿಎಂಸಿ ಅಧಿಕಾರಿಗಳು ತಮ್ಮ ಕಾರ್ಯವನ್ನು ಅರ್ಧದಲ್ಲೇ ನಿಲ್ಲಿಸಿ ಹಿಂದಿರುಗಿದ್ದಾರೆ. ಕಂಗನಾ ರಣಾವತ್ ಕಚೇರಿ  ಕಟ್ಟಡ ನೆಲಸಮ ಮಾಡುವ ಕಾರ್ಯ ಅರ್ಧದಲ್ಲೇ ನಿಲ್ಲಿಸಿದ್ದೇ ಆದರೂ, ಕಚೇರಿ  ಕಟ್ಟಡದ ಒಳಭಾದ ಭಾಗಶಃ ನೆಲಸಮವಾಗಿದೆ. ನೆಲಸಮವಾದ ತಮ್ಮ ಕಚೇರಿ  ಕಟ್ಟಡದ ಒಳಭಾಗದ ಕೆೇಲವು ವೀಡಿಯೋಗಳನ್ನ ಕಂಗನಾ ರಣಾವತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ ಮಾಡಿದ್ದಾರೆ.

ನೋಡುಮಗ.ಕಂ ವಿಡಿಯೋ ನ್ಯೂಸ್ ಗಳನ್ನು ನೋಡಲು ನಮ್ಮ   YOUTUBE  ಚಾನೆಲ್  SUBSCRIBE  ಮಾಡಿ — >>

ನನ್ನ ಶತ್ರುಗಳು ನಾನು ಯಾವತ್ತೂ ತಪ್ಪು ಮಾಡುವುದಿಲ್ಲ ಎಂಬುವುದನ್ನ ಪದೇ ಪದೇ ಇಂತಹ ಕಾರ್ಯಗಳನ್ನು ಮಾಡುವುದರ ಮೂಲಕ ಸಾಬೀತು ಮಾಡುತ್ತಿದ್ದಾರೆ. ಆದ್ದರಿಂದಲೇ ನಾನು ಈಗ ಮುಂಬೈ ನನ್ನ ಪಿಓಕೆ ಆಗಿದೆ ಎಂದು ಹೇಳಿದ್ದು, ಎಂದು ಕಂಗನಾ ರಣಾವತ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ಬಿಎಂಸಿ ಅಧಿಕಾರಿಗಳು ಮನೆಯನ್ನು ಒಡೆದು ಹಾಕುತ್ತಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ ಮಾಡಿದ್ದಾರೆ.

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ INSTAGRAM ಪೇಜ್ Follow ಮಾಡಿ -->>

(Visited 24 times, 1 visits today)

You Might Be Interested In