ಸ್ಯಾಂಡಲ್‌ವುಡ್‌ಗೆ ಮತ್ತೋರ್ವ ನಿರ್ದೇಶಕಿ ಎಂಟ್ರಿ

ಚಂದನವನದಲ್ಲಿ ಹೊಸ ನಿರ್ದೇಶಕಿಯೊಬ್ಬರು ಸೇರಿಕೊಳ್ಳಲಿದ್ದು, ಮೋಟಿವೇಷನಲ್ ಸ್ಪೀಕರ್ ಆಗಿದ್ದ ವಿಸ್ಮಯಾ ಗೌಡ ಈಗ ನಿರ್ದೇಶಕಿಯಾಗಿ ಪರಿಚಯವಾಗುತ್ತಿದ್ದಾರೆ.

ಚಂದನವನದಲ್ಲಿ ಮಹಿಳಾ ನಿರ್ದೇಶಕಿಯರು ಬೆರಳೆಣಿಕೆಯಷ್ಟು ಇದ್ದಾರೆ. ಅದರಲ್ಲೂ ಹೊಸಬರು ನಿರ್ದೇಶನಕ್ಕೆ ಕೈ ಹಾಕುವ ಸಾಹಸ ಮಾಡುವವರು ತೀರಾ ಕಡಿಮೆ. ಕವಿತಾ ಲಂಕೇಶ್, ಸುಮನಾ ಕಿತ್ತೂರು, ಪ್ರೇಮಾ ಕಾರಂತ್, ರೂಪಾ ಅಯ್ಯರ್ ಅವರ ಸಾಲಿಗೆ ಈಗ ಚಂದನವನದಲ್ಲಿ ಹೊಸ ನಿರ್ದೇಶಕಿಯೊಬ್ಬರು ಸೇರಿಕೊಳ್ಳಲಿದ್ದಾರೆ. ಮೋಟಿವೇಷನಲ್ ಸ್ಪೀಕರ್ ಆಗಿದ್ದ ವಿಸ್ಮಯಾ ಗೌಡ ಈಗ ನಿರ್ದೇಶಕಿಯಾಗಿ ಪರಿಚಯವಾಗುತ್ತಿದ್ದಾರೆ.

ಬಿಗ್‍ಬಾಸ್ ಮೂಲಕ ಹೆಸರು ಮಾಡಿದ್ದ ಡಾನ್ಸರ್ ಕಿಶನ್, ಕ್ರಿಕೆಟ್ ಅಂಗಳದಿಂದ ನೇರವಾಗಿ ಸಿನಿಮಾ ಜಗತ್ತಿಗೆ ಕಾಲಿಡುತ್ತಿರುವ ಪ್ರವೀಣ್‍ರಂತಹ ಹೊಸ ಪ್ರತಿಭೆಗಳಿಗೆ ವಿಸ್ಮಯಾ ಆಕ್ಷನ್ ಕಟ್ ಹೇಳಲಿದ್ದಾರೆ. ಕ್ಯೂಟ್ ರೊಮ್ಯಾಂಟಿಕ್ ಲವ್ ಸ್ಟೋರಿಯಲ್ಲಿ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಪುತ್ರಿ ಶ್ರಾವ್ಯಾ ರಾವ್ ಕೂಡ ಇದ್ದಾರೆ. ವಿಶೇಷ ಅಂದ್ರೆ ಶ್ರಾವ್ಯ ಅವರು ಇನ್ನು ಮುಂದೆ ಸಾತ್ವಿಕಾ ಹೆಸರಿನ ಮೂಲಕ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ. ಹೆಸರು ಬದಲಿಸಿಕೊಂಡಿರುವ ಅವರು ಹೊಸ ಸಿನಿಮಾ ತಂಡದಲ್ಲಿ ಕೆಲಸ ಮಾಡಲು ಸಜ್ಜಾಗಿದ್ದಾರೆ.

ಬಹಳ ಸಮಯದ ನಂತರ ಬೋಲ್ಡ್​ ಫೋಟೋ ಹಂಚಿಕೊಂಡ ಶಿಲ್ಪಾ ಶೆಟ್ಟಿ

ಚಿಕ್ಕಮಗಳೂರು ಮೂಲದ ಕಿಶನ್, ಈಗಾಗಲೇ ತಮ್ಮ ಡ್ಯಾನ್ಸ್‌ನ ಮೂಲಕ ಅನೇಕರಿಗೆ ಇಷ್ಟವಾಗಿದ್ದಾರೆ. ಇದುವರೆಗೂ ಡ್ಯಾನ್ಸ್ ಮತ್ತು ‘ಬಿಗ್ ಬಾಸ್’ ಮೂಲಕ ಫೇಮಸ್ ಆಗಿದ್ದ ಅವರೀಗ ನೇರವಾಗಿ ಬಣ್ಣದ ಲೋಕಕ್ಕೆ ಕಾಲಿಡಲಿದ್ದಾರೆ. ವಿಸ್ಮಯಾ ಗೌಡ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ಕಿಶನ್ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಿಶನ್ ರೊಂದಿಗೆ ಪ್ರವೀಣ್ ಎಂಬ ಮತ್ತೋರ್ವ ನಟ ಕೂಡ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ! ಅವರಿಗೂ ಕೂಡ ಇದು ಮೊದಲ ಪ್ರಯತ್ನವಾಗಿದೆ.

 

English Version:

A new director will be added to Chandanawana.Vismaya Gowda, a motivational speaker, is now making her directorial debut.
There are only few female directors in Chandanawana.Newcomers are few and far between who make their way into the direction.
Along with Kavitha Lankesh, Sumana Kittur, Prema Karanth, Roopa Iyer a new director will be added to the line at Chandanawana.
Vismaya Gowda, a motivational speaker, is now making her directorial debut.  Vismaya is about to say action-cut to talents like Bigg Boss fame and Dancer Kishan. And Praveen who is stepping into the cinema world straight from the cricket world.Shravya Rao, daughter of director Om Prakash Rao is also actimg in the movie. But Shravya is entering to the industry in the name of Satwika. Kishan will be in the leading role. Praveen will be seen in the lead role too along with Kishan.

(Visited 29 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *