ಡ್ರಗ್ಸ್ ವಿಚಾರಕ್ಕೆ ಸಬಂಧಿಸಿದಂತೆ ರಾಕಿಂಗ್ ಸ್ಟಾರ್ ಖಡಕ್ ಮಾತು

ಈಗ ದೇಶದಾದ್ಯಂತ ನಮ್ಮ ಸ್ಯಾಂಡಲ್ ವುಡ್ ಡ್ರಗ್ ಜಾಲದ ವಿಚಾರದಲ್ಲಿ ಸದ್ದು ಮಾಡುತ್ತಿದೆ. ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಜಾಲದ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸ್ಯಾಂಡಲ್ವುಡ್ ನಟ-ನಟಿಯರಿಗೆ ಡ್ರಗ್ ಸಪ್ಲೈ ಮಾಡುತ್ತಿದ್ದ ಸಾಕಷ್ಟು ಜನರನ್ನು ಅರೆಸ್ಟ್ ಮಾಡಲಾಗುತ್ತಿದೆ.  ಡ್ರಗ್ಸ್ ಪ್ರಕರಣಕ್ಕೆ ಸಿಲುಕಿಕೊಂಡಿರುವ ಸ್ಯಾಂಡಲ್ ವುಡ್ ನ ಖ್ಯಾತ ನಟಿಯರಾದಂತಹ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗುಲ್ರಾನಿ ಅವರ ಮನೆಗಳ ಮೇಲೆ ಪೋಲಿಸರು ದಾಳಿ ಮಾಡಿ, ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ. 

nodu maga website logo

ಇತ್ತೀಚೆಗಷ್ಟೇ  ಚಿತ್ರೀಕರಣ ಮಾಡಲು  ಕರ್ನಾಟಕ ಸರ್ಕಾರ ಅವಕಾಶ ನೀಡಲಾದರೂ, ಸಿನಿಮಾ ಥಿಯೇಟರ್ಗಳನ್ನು ಓಪನ್ ಮಾಡಲು ಇನ್ನು ಅವಕಾಶ ನೀಡಿಲ್ಲ. ಇದರಿಂದ ಚಿತ್ರ ರಂಗಕ್ಕೂ ಮತ್ತು ಚಿತ್ರ ರಂಗದಲ್ಲಿ ಕೆಲಸ ಮಾಡುವವರು ತುಂಬಾ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಈ ಕುರಿತಾಗಿ ರಾಕಿಂಗ ಸ್ಟಾರ ಯಶ್ ಸೇರಿದಂತೆ ಸ್ಯಾಂಡಲ್ ವುಡ್ ನ ಹಲವಾರು ಗಣ್ಯರು ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ, ರಾಕಿಂಗ ಸ್ಟಾರ ಯಶ್ ಮಾಧ್ಯಮದ ಜೊತೆ ಸ್ಯಾಂಡಲ್ ವುಡ್ ನ  ಡ್ರಗ್ಸ್ ಜಾಲದ ಪ್ರಕರಣ ಬಗ್ಗೆ ಖಡಕ್ ಆಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. 

ನೋಡುಮಗ.ಕಂ ವಿಡಿಯೋ ನ್ಯೂಸ್ ಗಳನ್ನು ನೋಡಲು ನಮ್ಮ   YOUTUBE  ಚಾನೆಲ್  SUBSCRIBE  ಮಾಡಿ — >>

Yash speaks about drugs

ಮಾಧ್ಯಮದವರು, ಸ್ಯಾಂಡಲ್ ವುಡ್ ನ ಡ್ರಗ್ಸ್ ಜಾಲದ ಪ್ರಕರಣದ ಬಗ್ಗೆ ನಿಮಗೆ ಅರಿವಿತ್ತಾ ಎಂದು ಪ್ರಶ್ನಿಸಿದಾಗ, ರಾಕಿಂಗ ಸ್ಟಾರ ಯಶ್ ಅವರು “ನಿಮಗೆ ಡ್ರಗ್ಸ್ ಜಾಲದ ಪ್ರಕರಣದ ಬಗ್ಗೆ ಗೊತ್ತಿತ್ತಾ?” ಎಂದು ಮಾಧ್ಯಮದವರಿಗೆ ಖಡಕ್ ಆಗಿ ಪ್ರಶ್ನಿಸಿದ್ದಾರೆ. “ನಿಮ್ಮ ಕೆಲಸ ಏನಂದರೆ, ಪ್ರಪಂಚದಲ್ಲಿ ಏನು ನಡಿತಾ ಇದೆ, ಯಾರ ಜೀವನದಲ್ಲಿ ಏನು ನಡಿತಿದೆ, ಅವರ ಜೀವನ ಹೇಗೆ ಅನ್ನೋದನ್ನ ಮೈಕ ಹಿಡಿದು ತಿಳಿಸವವರು ಮಾದ್ಯಮದವರಾದ ನೀವು. ನಿಮಗೆ ಡ್ರಗ್ಸ್ ಜಾಲದ ಪ್ರಕರಣದ ಬಗ್ಗೆ ಗೊತ್ತಿರಲಿಲ್ಲ. ಹೀಗಿರುವಾಗ, ನಾನಾಯ್ತು, ನನ್ನ ಬದುಕಾಯ್ತು ಎಂದು ನನ್ನ ಪಾಡಿಗೆ ನಾನ ಇದೀನಿ, ನನಗೆ ಹೇಗೆ ಇದರ ಬಗ್ಗೆ ಗೊತ್ತಾಗತ್ತೆ. ” ಎಂದು ಹೇಳಿದ್ದಾರೆ.

ನಂತರ ಮಾದ್ಯಮದವರು ಡ್ರಗ್ಸ್ ಜಾಲದ ಪ್ರಕರಣದಲ್ಲಿ ಕನ್ನಡ ಚಿತ್ರ ರಂಗ ಎಂದು ಪದೇ ಪದೇ ಹೇಳಿದಾಗ, ರಾಕಿಂಗ ಸ್ಟಾರ ಯಶ್ ಅವರು “ಕನ್ನಡ ಚಿತ್ರ ರಂಗ ಎಂದು ನಾನು ಅನ್ಕೋಳಲ್ಲ. ಯಾಕೆಂದರೆ, ಡ್ರಗ್ಸ ಎನ್ನುವುದು ಈಡೀ ಜಗತ್ತಿಗೆ ಮಾರಕ ಮತ್ತು ಈಡೀ ಯುವ ಪೀಳಿಗೆಗೆ ಮಾರಕ. ಅದರಲ್ಲಿ ಯಾರ್ಯಾರು ಅಂತ ನೋಡಿದ್ರೆ, ನಿಮಗೆ ಹತ್ತು ಡಿಪಾರ್ಟಮೆಂಟ್ ಇರುತ್ತವೆ. ಅವುಗಳಲ್ಲಿ ಹೈ ಲೈಟ್ ಆಗುವುದು ಕನ್ನಡ ಚಿತ್ರ ರಂಗ ಮಾತ್ರ. ಆದ್ದರಿಂದ ಬರೀ ಕನ್ನಡ ಚಿತ್ರ ರಂಗ ಅಂತ ಮಾತ್ರ ಹೇಳಬೇಡಿ. ಯುವಕರು, ಯುವತಿಯರು, ನಮ್ಮ ರಾಜ್ಯದ ಜನರಿಗೆ ಆಗ್ತಾ ಇದೆ ಅಂತ ನಾವೆಲ್ಲರೂ ಅದಕ್ಕೆ ಹೋರಾಡೊಣ. ನನ್ನ ಕನ್ಸರ್ನ ಇಷ್ಟೇ, ಚಿಕ್ಕ ಮಕ್ಕಳಿಂದನೂ ಇದರ ಬಗ್ಗೆ ಅವೆರನೆಸ್ ಮಾಡುವುದು” ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ ಫೇಸ್ಬುಕ್ ಪೇಜ್ ಲೈಕ್ ಮಾಡಿ -->>

ಅಷ್ಟೇ ಅಲ್ಲ, ಡ್ರಗ್ಸಗೆ ದಾಸರಾದವರಿಗೆ, ಯಶ್ ರವರು “ನಿಮ್ಮ ಜೀವನ, ನಿಮ್ಮ ದೇಹ ನಿಮ್ಮದಲ್ಲ, ಅದು ನಿಮ್ಮ ಅಪ್ಪ ಅಮ್ಮ ಕೊಟ್ಟಿರೋದು. ನಿಮ್ಮ ಬಗ್ಗೆ ಪ್ರತಿ ಕ್ಷಣ ಯೋಚನೆ ಮಾಡುತ್ತಾರೆ. ನೀವು ಮುಂದೆ ಕಲಿತು, ದೊಡ್ಡ ವ್ಯಕ್ತಿ ಆಗುತ್ತಿರಿ ಎಂದು ಕನಸು ಕಂಡಿರುತ್ತಾರೆ. ಸುಮ್ನೆ ಈ ಡ್ರಗ್ಸ ಅನ್ನೋ ದುಷ್ಚಟ ಬಿಟ್ಟು, ಚೆನ್ನಾಗಿ ಕಲಿತು ಎನಾದ್ರು ಸಾಧನೆ ಮಾಡಿ” ಎಂದು ಎಲ್ಲ ಯುವ ಪೀಳಿಗೆಗೆ ಸಂದೇಶ ನೀಡಿದ್ದಾರೆ.

(Visited 44 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *