ನಾಯಕಿಯಾದ ಗಾಯಕಿ ಅನನ್ಯಾ ಭಟ್

‘ಸೋಜುಗಾದ ಸೂಜು ಮಲ್ಲಿಗೆ’ ಹಾಡಿನಿಂದ ಮನೆಮಾತಾದ ಅನನ್ಯಾ ಭಟ್ ಈಗ ನಾಯಕಿಯಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಕನ್ನಡದ ಬಹುಬೇಡಿಕೆಯ ಗಾಯಕಿಯಾಗಿರುವ ಅನನ್ಯಾ ಭಟ್, ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ಇದಾಗಿದ್ದು, ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಅನನ್ಯಾ ಭಟ್.

‘ದಾದಾಸಾಹೇಬ್ ಫಾಲ್ಕೆ ಸೌತ್ 2020’ ಪ್ರಶಸ್ತಿ ಪಟ್ಟಿ ಬಿಡುಗಡೆ

ಎರಡು ದಶಕಗಳ ಹಿಂದೆ ಕುಂದಾಪುರ, ಬೈಂದೂರು, ಭಟ್ಕಳಗಳಲ್ಲಿ ನಡೆದ ನಿಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡ ಗುರು ಸವನ್ ಎಂಬುವರು ಸಿನಿಮಾ ನಿರ್ದೇಶಿಸುತ್ತಿದ್ದು, ಸಿನಿಮಾಕ್ಕೆ ‘ಸೇನಾಪುರ’ ಎಂದು ಹೆಸರಿಡಲಾಗಿದೆ

ಸಿನಿಮಾವನ್ನು ಅಮಿತ್ ಕುಮಾರ್, ರಾಹುಲ್ ದೇವ್ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಅನನ್ಯಾ ಭಟ್, ದಿನೇಶ್ ಮಂಗಳೂರು, ಗಿರಿರಾಜ್ ಇನ್ನೂ ಕೆಲವು ಪ್ರಮುಖ ನಟರು ಇರಲಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡುವವರು ಮಿಲನ್ ಹರೀಶ್ ಮತ್ತು ಅನನ್ಯಾ ಭಟ್.

ಈ ಸಿನಿಮಾ ಅನನ್ಯಾ ಭಟ್ ಅವರಿಗೆ ಮೂರನೇ ಸಿನಿಮಾ ಅಂತೆ. ಈ ಹಿಂದೆ ಹಲವಾರು ಅವಕಾಶಗಳು ಬಂದಿದ್ದವಾದರೂ ಕತೆ ಇಷ್ಟವಾಗದೆ ನಟಿಸಿರಲಿಲ್ಲ ಅನನ್ಯಾ, ಈಗ ಕತೆ ಇಷ್ಟವಾದ ಕಾರಣ ನಟಿಸುತ್ತಿರುವುದಾಗಿ ಹೇಳಿದ್ದಾರೆ.

English Version :

Ananya Bhatt a female Singer who become famous by the song ”Sojugaada sooji mallige” is coming out as an actor in front her fans.
Ananya Bhatt, the most on-demand singer in Kannada has accepted to acting in amovie. This is a movie based on real events, and Ananya is playing a lead role.
An event which has happened in Kundapura, baindooru Bhatkala two years ago is the main string of the story of the Movie. Guru Savan is a director and ‘Senapura’ is the name of the movie.
Amithkumar and Rahul dev are the producers.
Ananya Bhatt, Dinesh Mangalore, Giriraj and many other main actors are acting in the Movie. Milan Harish and Ananya Bhatt are music directors.
This is Anaya Bhatt’s third film. Ananya says she is acting now because she liked the story even though there were many opportunities in the past.

 

(Visited 119 times, 1 visits today)

You Might Be Interested In

LEAVE YOUR COMMENT

Your email address will not be published. Required fields are marked *