image2

Gopal Kulkarni

Actor, Producer

ಹಳ್ಳಿಯಿಂದ ಲಂಡನ್ ಗೆ, ಲಂಡನ್ ನಿಂದ ಸ್ಯಾಂಡಲ್ ವುಡ್ ಗೆ…

ಉತ್ತರ ಕರ್ನಾಟಕದ ಭಾಗದಲ್ಲಿ ಅನೇಕ ಪ್ರತಿಭೆಗಳು ಉದ್ಭವಿಸಿದ್ದು ಅವರೆಲ್ಲ ತಮ್ಮ ತಮ್ಮ ಕ್ಷೇತ್ರಗಳಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದಾರೆ, ಅದು ರಾಜಕೀಯ ,ಕಲಾಕ್ಷೇತ್ರ, ಕ್ರೀಡಾ ಕ್ಷೇತ್ರ ಉದ್ಯಮ ಕ್ಷೇತ್ರ, ಉದ್ಯೋಗ ಕ್ಷೇತ್ರ ಇರಬಹುದು, ಇಂತಹ ಕ್ಷೇತ್ರಗಳಲ್ಲಿ ಒಂದಕ್ಕೊಂದು ಸಂಭಂದವನ್ನು ಇಟ್ಟುಕೊಂಡು ಕನ್ನಡದ ಕೀರ್ತಿ ಪತಾಕೆಯನ್ನು ನಮ್ಮ ದೇಶದಲ್ಲಿ ಅಲ್ಲದೆ ಲಂಡನ್ ನಲ್ಲು ಕೂಡ ಕನ್ನಡ ಪರ ನಿಂತು ಕನ್ನಡತನ ಮತ್ತು ಕನ್ನಡ ಸಂಘಟನೆಗಳನ್ನು ಬೆಳೆಸುವವರಲ್ಲಿ ಕೆಲವೇ ಕೆಲವು ಜನಗಳು ನಮಗೆ ಸಿಗುತ್ತಾರೆ.

ಅಂತವರಲ್ಲಿ ನಮ್ಮ ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಕನಮಡಿ ಗ್ರಾಮದ ಶ್ರೀ ಗೋಪಾಲ್ ಕುಲಕರ್ಣಿ ಯವರು ಉತ್ತುಂಗದಲ್ಲಿ ನಿಲ್ಲುತ್ತಾರೆ,
ಒಂದು ಸಣ್ಣ ಕುಟುಂದಲ್ಲಿ ಜನಸಿದ ಇವರು ಬಾಲ್ಯದ ಶಿಕ್ಷಣವನ್ನು ಹುಟ್ಟುರಿನಲ್ಲಿ ಮುಗಿಸಿ ಹೆಚ್ಷಿನ ವಿದ್ಯಾಭಾಸಕ್ಕಾಗಿ ವಿಜಯಪುರ ಮತ್ತು ಕಲಬುರಗಿ ಯಲ್ಲಿ ಮುಗಿಸಿ, ಕೆಲಸಕ್ಕಾಗಿ ನಾಸಿಕ್. ಹೈದರಾಭಾದ್ ಬೆಂಗಳೂರು ಮುಂಬಯಿಗಳಲ್ಲಿ ದುಡಿದರು. ಸಹಪಾಠಿಯಾಗಿದ್ದ ಸುರೇಖಾ ಕುಲಕರ್ಣಿಯವರನ್ನು ಮದುವೆಯಾದರು, ಜೊತೆಗೆ ಸಿನಿಮಾ ಆಸಕ್ತಿ ಕೂಡ ಬೆಳೆಸಿಕೊಂಡು ಸಿನಿಮಾ ಅವಕಾಶಕ್ಕಾಗಿ ಬೆಂಗಳೂರು ಅಲೆದಾಡಿದರೂ ಕೆಲವು ಚಿತ್ರಗಳಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿ ಅವಕಾಶ ಸಿಕ್ಕಿದ್ದು ಬಿಟ್ಟರೆ ಮತ್ತೆನೂ ಆಗಲಿಲ್ಲ.

ಸಿನಿಮಾರಂಗಕ್ಕೆ ಕಾಲಿಡುವ ಸಲುವಾಗಿ ವಿಜಯಪುರದಿಂದ ಚನ್ನಪಟ್ಟಣಕ್ಕೆ ಬಂದು ಅಲ್ಲಿ ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಸೇರಿ ರಜೆಯ ದಿನಗಳಲ್ಲಿ ಬೆಂಗಳೂರಿಗೆ ಬಂದು ದಿನವಿಡೀ ಸುತ್ತಾಡಿ ಸಿಕ್ಕಸಿಕ್ಕವರಿಗೆಲ್ಲಾ ತಮ್ಮ ಫೋಟೋ ಕೊಟ್ಟು ಸಿನಿಮಾದಲ್ಲಿ ಚಾನ್ಸ್ ಕೇಳಿದವರು ನಿರ್ದೇಶಕರಾದ ಸಾಯಿಕುಮಾರ್, ಸುನೀಲ್ ಕುಮಾರ್ ದೇಸಾಯಿ ಮತ್ತು ಕಾಶೀನಾಥರ ಮನೆಗೆ ಹೋಗಿ ಭೇಟಿಯಾಗಿದ್ದು ಇದೆ. ಅವಕಾಶ ಸಿಗದಿದ್ದಾಗ ಜ್ಯೂನಿಯರ್ ಆರ್ಟಿಸ್ಟ್ ಆಗಿ ಟೈಗರ್ ಪ್ರಭಾಕರ್ ರವರ ”ಅಶೋಕ ಚಕ್ರ” , ರಾಘವೇಂದ್ರ ರಾಜ್ ಕುಮಾರ್ ರವರ ”ಅನುಕೂಲಕ್ಕೊಬ್ಬ ಗಂಡ”, ಶಿವರಾಜ್ ಕುಮಾರ್ ರವರ ”ಆಸೆಗೊಬ್ಬ ಮೀಸೆಗೊಬ್ಬ”, ಅಂಬರೀಷರ ”ಮತ್ಸರ” ಮತ್ತು ಅಮಿತಾಭ್ ಬಚ್ಚನ್ ರ ”ಹಮ್” ಹಿಂದಿ ಸಿನಿಮಾದಲ್ಲಿ ನಟಿಸಿ ಸರಿಯಾದ ಚಾನ್ಸ್ ಸಿಗದೆ ವಾಪಸ್ ಬಂದು ನಂತರದ ದಿನಗಳಲ್ಲಿಉನ್ನತ ಅಧ್ಯಯನ ಮಾಡಿ ಲಂಡನ್ ನಲ್ಲಿ ಉದ್ಯೋಗ ದೊರೆತಾಗ ಕುಟುಂಬ ಸಮೇತರಾಗಿ ಬಂದು ಅಲ್ಲೇ ನೆಲೆಗೊಂಡರು.

ಸದ್ಯ ಲಂಡನ್ ನಲ್ಲಿ ನೆಲೆ ನಿಂತಿರುವ ಗೋಪಾಲ್ ಕುಲಕರ್ಣಿಯವರು ಸಿನಿಮಾ ಮೇಲಿದ್ದ ಆಸಕ್ತಿಗಾಗಿ ಹಲವು ಕನ್ನಡ ಸಂಘಟನೆಗಳ ಜತೆಗೂಡಿ ಡ್ರಾಮಾಗಳಲ್ಲಿ ತೊಡಗಿಕೊಂಡರು ಫುಲ್ಸ್ಟಾಫ್ ಹಾಲಿವುಡ್ ನಲ್ಲಿ ”ದಿ ವೀಕೆಂಡ್ ಪ್ಲಾನ್” ಎನ್ನುವ ಪೈಲೆಟ್ ಎಪಿಸೋಡ್ ನಿರ್ಮಿಸಿ ಅದರಲ್ಲಿ ನಟನೆ ಕೂಡ ಮಾಡಿದರು. ನಂತರದ ದಿನಗಳಲ್ಲಿ ಒಂದು ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದ ಇವರಿಗೆ ನಾಗತಿಹಳ್ಳಿ ಚಂದ್ರಶೇಖರ್ ಪರಿಚಯವಾಗಿ ಅವರ ಚಿತ್ರದಲ್ಲಿ ಅವಕಾಶ ಕೇಳಿದಾಗ ಅವರು ಹಾಗೆಲ್ಲಾ ಎಲ್ಲರಿಗೂ ಅವಕಾಶ ಕೊಡಲು ಆಗುವುದಿಲ್ಲವೆಂದಾಗ ಬೆಂಗಳೂರಿಗೆ ಬಂದು ಅವರ ಸಂಸ್ಥೆಯಲ್ಲಿ ಸಿನಿಮಾ ತರಬೇತಿ ಪಡೆದುಕೊಂಡರು. ನಾಗತಿಹಳ್ಳಿಯವರು ಇವರ ಪ್ರತಿಭೆ ನೋಡಿ ”ಇಂಡಿಯಾ vs ಇಂಗ್ಲೆಂಡ್” ಚಿತ್ರದಲ್ಲಿಯೇ ಮೇನ್ ವಿಲನ್ ಆಗಿ ಪಾತ್ರ ನಿರ್ವಹಿಸಿದ್ದು ಮತ್ತು NRI ಗೆಳೆಯರೊಂದಿಗೆ ತಾವು ಕೂಡ ನಿರ್ಮಾಣದಲ್ಲಿ ಪಾಲ್ಗೊಂಡಿದ್ದು ನಿಜಕ್ಕೂ ಅದ್ಬುತ ಅಂತನೇ ಹೇಳಬಹುದು ಇನ್ನೊಂದು ಖುಷಿಯ ವಿಚಾರವೆಂದರೆ ಚಿತ್ರದ ಕೆಲವು ಮೇಕಿಂಗ್ ಚಿತ್ರಗಳನ್ನು ನೋಡಿದ ಫ್ಯಾಮಿಲಿಯವರು ಮತ್ತು ಫ್ರೆಂಡ್ಸ್ ಇವರಿಗೆ ಪ್ರೀತಿಯಿಂದ ಬಿಜಾಪುರ್ ಬಾಂಡ್ ಅಂತ ಬಿರುದು ಕೂಡ ನೀಡಿದ್ದಾರೆ.

 

 

(Visited 293 times, 1 visits today)

Videos