ಸರ್ಜಾ ಕುಟುಂಬದಲ್ಲಿ ಮತ್ತೊಂದು ಆಘಾತಕಾರಿ ಸುದ್ದಿ

ಕೋರೊನಾ ಮಹಾಮಾರಿಯು ಎಲ್ಲ ಕಡೆ ಹಬ್ಬಿದೆ. ಕೋರೊನದಿಂದ ಈಗಾಗಲೇ ಜನರ ಜೀವನವನ್ನು ಅಲ್ಲೋಲಕಲ್ಲೋಲ ಮಾಡಿದೆ. ಇದರಿಂದ ಹಲವಾರು ಜನ ನೀರುದ್ದ್ಯೋಗಿಗಳಾಗಿದ್ದಾರೆ. ಕೋರೊನಾ ಕರ್ನಾಟಕದಲ್ಲಿ ಮರಣ ಮೃದಂಗ ಬಾರಿಸುತ್ತಿದೆಇತ್ತೀಚಿನ ದಿನಗಳಲ್ಲಿ ಕಿರುತೆರೆ ಮತ್ತು ಸ್ಯಾಂಡಲ್ ವುಡ್ ನಟ, ನಟಿಯರಲ್ಲಿ ಸೊಂಕು ಪತ್ತೆಯಾಗುತ್ತಿದೆ.

ಇನ್ನೂ ಹೆಚ್ಚು ಕನ್ನಡ ನ್ಯೂಸ್ ಓದಲು ನೋಡುಮಗ.ಕಂ ಫೇಸ್ಬುಕ್ ಪೇಜ್ ಲೈಕ್ ಮಾಡಿ -->>

Chiranjeevi Sarja

ಅದರಲ್ಲೂಸರ್ಜಾ ಕುಟುಂಬದಲ್ಲಿ ಒಂದರ ಮೇಲೊಂದು ಆಘಾತಕಾರಿ ಸುದ್ದಿ ಬರುತ್ತಲೇ ಇದೆ. 20 ಜೂನರಂದು ನಾವು ನಮ್ಮ ನೆಚ್ಚಿನ ಯುವನಟ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡೆವು. ಇದು ಕೇವಲ ಸರ್ಜಾ ಕುಟುಂಬಕ್ಕೆ ಭರಿಸಲಾಗದ ನೋವು. ಇಡೀ ಸ್ಯಾಂಡಲ್ ವುಡ್ ಚಿತ್ರ ತಂಡಕ್ಕೆ ಮತ್ತು ಇಡೀ ಕರ್ನಾಟಕ್ಕೆ ಅತ್ಯಂತ ಆಘಾತಕಾರಿ ಸುದ್ದಿ.

ಅವರ ಅಕಾಲಿಕ ಮರಣದ ನೋವಿನಿಂದ ಇನ್ನೂ ಸರ್ಜಾ ಕುಟುಂಬ ಹೊರಬಂದಿಲ್ಲ, ಅಷ್ಟರಲ್ಲಿ ಸ್ಯಾಂಡಲ್ ವುಡ್ ನಟ ಧೃವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ಸರ್ಜಾ ಅವರಿಗೆ ಕೋರೊನಾ ಪಾಸಿಟಿವ್ ಆಗಿರುವುದು ದೃಡಪಟ್ಟಿತ್ತು. ಕೆಲವು ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು, ಈಗ ದಂಪತಿ ಹೋಮ್ ಕ್ವಾರಂಟೈನ್ ಆಗಿದ್ದು ಮನೆಯಲ್ಲೇ ಅಗತ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ನೋಡುಮಗ.ಕಂ ವಿಡಿಯೋ ನ್ಯೂಸ್ ಗಳನ್ನು ನೋಡಲು ನಮ್ಮ   YOUTUBE  ಚಾನೆಲ್  SUBSCRIBE  ಮಾಡಿ — >>

Dhruv, prerana and Aishvarya sarja

ಇದೀಗ ಸರ್ಜಾ ಕುಟುಂಬದಲ್ಲಿ ಮತ್ತೋರ್ವರಿಗೆ ಕೋರೊನಾ ಪಾಸಿಟಿವ್ ಆಗಿರುವುದು ಖಚಿತವಾಗಿದೆ. ಅದು ಬೆರೆ ಯಾರೂ ಅಲ್ಲ, ಕೋರೊನಾ ದೃಡಪಟ್ಟಿರುವುದು ಅರ್ಜುನ ಸರ್ಜಾರವರ ಪುತ್ರಿ ಸ್ಯಾಂಡಲ್ ವುಡ್ ನಟಿ ಐಶ್ವರ್ಯಾ ಸರ್ಜಾರವರಿಗೆ. ಇದನ್ನು ಖುದ್ದಾಗಿ ಐಶ್ವರ್ಯಾರವರು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡುವುದರ ಮೂಲಕ ತಮಗೆ ಕೋರೊನ ಪಾಸಿಟಿವ್ ದೃಡಪಟ್ಟಿದ್ದು, ಈಗ ಹೋಮ್ ಕ್ವಾರಂಟೈನ್ ಆಗಿರುವುದಾಗಿ ಮತ್ತು ಮನೆಯಲ್ಲೆ ಅಗತ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಹಾಗೂ ಅವರ ಸಂಪರ್ಕಕ್ಕೆ ಯಾರಾದರೂ ಬಂದಿದ್ದರೆ ತಕ್ಷಣ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ. ಐಶ್ವರ್ಯಾರವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಐಶ್ವರ್ಯಾರವರ ಮತ್ತು ಸರ್ಜಾ ಅಭಿಮಾನಿಗಳು ಆಶಿಸುತ್ತಿದ್ದಾರೆ.

(Visited 114 times, 1 visits today)

Share and Enjoy !

You Might Be Interested In